Eclipse: 2021ರಲ್ಲಿ ಒಟ್ಟು ಎಷ್ಟು ಗ್ರಹಣ ಸಂಭವಿಸಲಿದೆ : ಯಾವಾಗ ಗೋಚರಿಸಲಿದೆ ಮೊದಲ ಸೂರ್ಯಗ್ರಹಣ

ಸೂರ್ಯ ಗ್ರಹಣ ಮತ್ತು ಚಂದ್ರಗ್ರಹಣ ಇದು ನೈಸರ್ಗಿಕವಾಗಿ ಸಂಭವಿಸುವಂಥದ್ದು. ಸಾಮಾನ್ಯವಾಗಿ ವರ್ಷಕ್ಕೆ 2 ಗ್ರಹಣ ನಡೆದೇ ನಡೆಯುತ್ತದೆ. 2021ರಲ್ಲಿ ಒಟ್ಟು 4 ಗ್ರಹಣ ಗೋಚರಿಸಲಿದೆ.  

Written by - Zee Kannada News Desk | Last Updated : Dec 27, 2020, 05:51 PM IST
  • 2021ರಲ್ಲಿ ಒಟ್ಟು 4 ಗ್ರಹಣಗಳು ಸಂಭವಿಸಲಿದೆ
  • ಹೊಸ ವರ್ಷದಲ್ಲಿ ಸಂಭವಿಸಲಿದೆ 2 ಸೂರ್ಯಗ್ರಹಣ, 2 ಚಂದ್ರಗ್ರಹಣ
  • ಗ್ರಹಣ ರಾಶಿಫಲಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಸಾಮಾನ್ಯ ನಂಬಿಕೆ
Eclipse: 2021ರಲ್ಲಿ ಒಟ್ಟು ಎಷ್ಟು ಗ್ರಹಣ ಸಂಭವಿಸಲಿದೆ : ಯಾವಾಗ ಗೋಚರಿಸಲಿದೆ ಮೊದಲ ಸೂರ್ಯಗ್ರಹಣ  title=
2021ರಲ್ಲಿ ಒಟ್ಟು 4 ಗ್ರಹಣಗಳು ಸಂಭವಿಸಲಿದೆ (file photoe)

ನವದೆಹಲಿ : 2021ರಲ್ಲಿ ಯಾವಾಗೆಲ್ಲಾ ಗ್ರಹಣ ಸಂಭವಿಸಲಿದೆ ಎಂದು ತಿಳಿದುಕೊಳ್ಳಬೇಕಾ? ವರ್ಷದ ಮೊದಲ ಗ್ರಹಣ ಗೋಚರಿಸಲಿದೆ ಎಂಬ ಕುತೂಹಲವೂ ಇದೆಯಾ? ಹಾಗಿದ್ದರೆ ಇಡೀ ವರ್ಷದಲ್ಲಿ ಒಟ್ಟು ಎಷ್ಟು ಗ್ರಹಣ ಗೋಚರಿಸಲಿದೆ, ಯಾವಾಗ ಗೋಚರಿಲಿದೆ ಈ ಎಲ್ಲಾ ಮಾಹಿತಿಯನ್ನು ನಾವು ನೀಡುತ್ತೇವೆ. 

ಸೂರ್ಯ ಗ್ರಹಣ (Solar Eclipse) ಮತ್ತು ಚಂದ್ರಗ್ರಹಣ ( Lunar Eclipse) ಇದು ನೈಸರ್ಗಿಕವಾಗಿ ಸಂಭವಿಸುವಂಥದ್ದು. ಸಾಮಾನ್ಯವಾಗಿ ವರ್ಷಕ್ಕೆ 2 ಗ್ರಹಣ ನಡೆದೇ ನಡೆಯುತ್ತದೆ. 2021ರಲ್ಲಿ ಒಟ್ಟು 4 ಗ್ರಹಣ ಗೋಚರಿಸಲಿದೆ.  ಇದು ದೇಶದ ವಿವಿಧ ಭಾಗಗಳಲ್ಲಿಯೂ ಗೋಚರಿಸಲಿದೆ. ಹೊಸ ವರ್ಷದಲ್ಲಿ (New year) ಸಂಭವಿಸಬಹುದಾದ ಸೂರ್ಯ ಮತ್ತು ಚಂದ್ರಗ್ರಹಣ, ಗ್ರಹಣ ದಿನಾಂಕ, ಗ್ರಹಣ ಸಮಯ ಅಲ್ಲದೆ ದೇಶದ ಯಾವ ಭಾಗದಲ್ಲಿ ಗ್ರಹಣ ಗೋಚರಿಸಲಿದೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ALSO READ : Chandra Grahan 2020: ಇಂದು ವರ್ಷದ ಕೊನೆಯ ಚಂದ್ರ ಗ್ರಹಣ, ಎಲ್ಲೆಲ್ಲಿ ಗೋಚರ ತಿಳಿಯಿರಿ
 

2021ರಲ್ಲಿ ನಡೆಯಲಿರುವ ಸೂರ್ಯಗ್ರಹಣ:
ಜೂನ್ 10 : ವರ್ಷದ ಮೊದಲ ಸೂರ್ಯಗ್ರಹಣ ಜೂನ್ 10ರಂದು ಸಂಭವಿಸಲಿದೆ. ಈ ಸೂರ್ಯಗ್ರಹಣ ಹೆಚ್ಚಾಗಿ ಯುರೋಪಿಯನ್ (Europe) ರಾಷ್ಟ್ರಗಳಲ್ಲಿ, ಏಷ್ಯಾದ ದೇಶಗಳಲ್ಲಿ, ಉತ್ತರ ಆಫ್ರಿಕಾ, ಪಶ್ಚಿಮ ಆಫ್ರಿಕಾ, ಉತ್ತರ ಅಮೆರಿಕಾ, ಅಟ್ಲಾಂಟಿಕ್ ಮತ್ತು ಆರ್ಕಟಿಕ್ ನಲ್ಲಿ ಗೋಚರಿಸಲಿದೆ.  ಭಾರತದಲ್ಲಿ ಇದು ಮಧ್ಯಾಹ್ನ 1.42ರ ಸುಮಾರಿಗೆ ಸಂಭವಿಸಲಿದ್ದು, ಸಂಜೆ 6.41ಕ್ಕೆ ಕೊನೆಗೊಳ್ಳಲಿದೆ. 

ಡಿಸೆಂಬರ್ 4: ಇದು ವರ್ಷದ ಕೊನೆಯ ಸೂರ್ಯಗ್ರಹಣವಾಗಲಿದೆ.  ಆ ದಿನ ದಕ್ಷಿಣ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕಾ, ಪೆಸಿಫಿಕ್ ಓಶಿಯನ್, ಅಟ್ಲಾಂಟಿಕ್ ಸಾಗರ, ಹಿಂದೂ ಮಹಾ ಸಾಗರ ಮತ್ತು ಅಂಟಾರ್ಟಿಕಾದಲ್ಲಿ ಕಂಡುಬರಲಿದೆ.  2020ರ ಕೊನೆಯ ಸೂರ್ಯಗ್ರಹಣ ಡಿ.14ಕ್ಕೆ ಸಂಭವಿಸಿತ್ತು. ಸಂಜೆ 7 ಗಂಟೆ 3ನಿಮಿಷಕ್ಕೆ ಗೋಚರವಾಗಿದ್ದ ಗ್ರಹಣ ರಾತ್ರಿ 12 ಗಂಟೆ 23 ನಿಮಿಷಗಳವರೆಗೆ ಇತ್ತು. ಅಂದರೆ ಸುಮಾರು 5 ಗಂಟೆಗಳವರೆಗೆ ಈ ಸೂರ್ಯಗ್ರಹಣ ಸಂಭವಿಸಿತ್ತು. 
 
ಸೂರ್ಯಗ್ರಹಣ ಮನುಷ್ಯರ ರಾಶಿಫಲಗಳ ಮೇಲೆ ಪ್ರಭಾವ   ಬೀರುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಗ್ರಹಣಗಳು (Eclipse) ಜನರ ಜೀವನ ಮೇಲೂ ಪರಿಣಾಮ ಬೀರುತ್ತದೆ ಎಂದು ಜ್ಯೋತಿಷಿಗಳು ನುಡಿಯುತ್ತಾರೆ. 

ALSO READ : Solar Eclipse 2020: ಈ ರಾಶಿಯಲ್ಲಿ ಗ್ರಹಣ ಸಂಭವಿಸಲಿದೆ, ಕಷ್ಟಗಳು ಹೆಚ್ಚಾಗುವ ಸಾಧ್ಯತೆ, ಈ ಕೆಲಸ ಮಾಡಬೇಡಿ​

2021ರ ಚಂದ್ರಗ್ರಹಣ: 
ಮೇ 26 : ಖಗೋಳ ಶಾಸ್ತ್ರಜ್ಞರ ಪ್ರಕಾರ ಮೇ 26ರಂದು ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ. ಈ ಚಂದ್ರಗ್ರಹಣ ದಕ್ಷಿಣ ಏಷ್ಯಾ, ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಪೆಸಿಫಿಕ್ ಒಶಿಯನ್, ಅಟ್ಲಾಂಟಿಕ್ ಸಾಗರ, ಹಿಂದೂಮಹಾ ಸಾಗರ, ಅಂಟಾರ್ಟಿಕಾದಲ್ಲಿ ಕಂಡುಬರಲಿದೆ. ಈ ಗ್ರಹಣ 2.17ಕ್ಕೆ ಆರಂಭವಾಗಲಿದ್ದು, 7.19ಕ್ಕೆ ಕೊನೆಗೊಳ್ಳಲಿದೆ. 

ನವೆಂಬರ್ 18 - 19: ಇದು ಪಾರ್ಶ್ವ ಚಂದ್ರಗ್ರಹಣ. ಈ ಗ್ರಹಣವು ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಉತ್ತರ ಆಫ್ರಿಕಾ, ಉತ್ತರ ಅಮೆರಿಕಾ, ದಕ್ಷಿಣ  ಅಮೆರಿಕಾ,  ಪೆಸಿಫಿಕ್ ಒಶಿಯನ್, ಅಟ್ಲಾಂಟಿಕ್ ಸಾಗರ, ಹಿಂದೂಮಹಾ ಸಾಗರ, ಆರ್ಕಿಟಿಕ್  ನಲ್ಲಿ ಸಂಭವಿಸಲಿದೆ.  ಭಾರತದಲ್ಲಿ ಈ ಚಂದ್ರಗ್ರಹಣ ಬೆಳಿಗ್ಗೆ 11.32ಕ್ಕೆ ಆರಂಭವಾಗಿ ಸಂಜೆ 6.33ಕ್ಕೆ ಕೊನೆಗೊಳ್ಳಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News